ಹುಮಾಯೂನನ ಸಮಾಧಿ ಭಾರತದ ದೆಹಲಿ ನಗರದಲ್ಲಿದೆ. ಮುಘಲ್ ಸಮ್ರಾಟ ಹುಮಾಯೂನನೂ ಸೇರಿದಂತೆ ಹಲವು ಮುಘಲ್ ಪ್ರತಿಷ್ಠಿತರ ಸಮಾಧಿಗಳನ್ನೊಳಗೊಂಡ ಈ ಸಂಕೀರ್ಣವು ಮುಘಲ್ ವಾಸ್ತುಶಿಲ್ಪ ಮತ್ತು ಕಲೆಗಳ ಉತ್ತಮ ಪ್ರತೀಕವೆನಿಸಿದೆ. ಇಲ್ಲಿನ ಸಮಾಧಿಯ ವಿನ್ಯಾಸವು ತಾಜ್ ಮಹಲ್‍‍ನ ವಿನ್ಯಾಸವನ್ನು ಬಹುಮಟ್ಟಿಗೆ ಹೋಲುತ್ತದೆ. ಈ ಸಂಕೀರ್ಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. == ಇವನ್ನೂ ನೋಡಿ == ತಾಜ್ ಮಹಲ್ ದೆಹಲಿ ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಕೊಂಡಿಗಳು == ಹುಮಾಯೂನನ ಸಮಾಧಿಯ ಚಿತ್ರಗಳು 2008-01-15 ವೇಬ್ಯಾಕ್ ಮೆಷಿನ್ ನಲ್ಲಿ. ಹುಮಾಯೂನನ ಸಮಾಧಿಯ ಉಪಗ್ರಹ ಚಿತ್ರಗಳು ದೆಹಲಿ ಸರಕಾರದ ಪ್ರವಾಸೋದ್ಯಮ ಇಲಾಖೆಯ ಮಾಹಿತಿತಾಣ 2008-03-08 ವೇಬ್ಯಾಕ್ ಮೆಷಿನ್ ನಲ್ಲಿ.